ರಾಜೇಶ್ ನಾಯ್ಕ

ಸಂಗೀತ ಧ್ಯಾನ ಸ್ಥಿತಿಗೆ ತಲುಪಿಸುವ ಮಾನಸಿಕ ಸಂತೋಷದ ಪರಮಘಟ್ಟದಲ್ಲಿ ದೀರ್ಘಕಾಲ ನಿಲ್ಲಿಸಬಲ್ಲ ಶಕ್ತಿ ಸಂಜೀವಿನಿ. ಅಂತಹ ಶಕ್ತಿ ಸಂಜೀವಿನಿ ನಾನು ಕಂಡಂತಹ ಅದ್ಭುತ ಗಾಯಕಿ ಸಿಂಚನಾ ಮೂರ್ತಿ.
ತಾನೊಬ್ಬ ಸಂಗೀತಗಾರ್ತಿ ಎಂಬುದನ್ನು ಸ್ಥಾಪಿಸಲು ಮುಂದಾಗದೆ, ವಾದಕರನ್ನೂ ಹಾಡಿನ ಮಧ್ಯೆ ಹುರಿದುಂಬಿಸಿ ನಮ್ಮಲ್ಲೂ ಒಂದು ಹೆಮ್ಮೆಯ ಭಾವವನ್ನು,
ಸಂಗೀತ ಸಾಮರ್ಥ್ಯವನ್ನೂ ಹೊರಚೆಲ್ಲುವಂತೆ ಮಾಡುವ ಮೂಲಕ ಪ್ರೇಕ್ಷಕರು ಮತ್ತೆ ಮತ್ತೆ ಸಂಗೀತಸುಧೆಯನ್ನು ಸವಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲವೇ ಸಂಗೀತಗಾರನ ಶಕ್ತಿ.
ಇವರ ಸಾತ್ವಿಕ ಗುಣ, ಹೃದಯ ವೈಶಾಲ್ಯತೆ ಸರಳತೆಯನ್ನು ಸರಳವಾಗಿಯೇ ಅವರ ದೀರ್ಘಕಾಲದ ಒಡನಾಟದಿಂದ ತಿಳಿಯಬಹುದಾಗಿದೆ. ಹೀಗೆಯೇ ಎಲ್ಲವೂ ಒಬ್ಬರಲ್ಲೇ ಮೇಳೈಸಿಕೊಂಡ ಸಾಂಸ್ಕೃತಿಕ ಮೇರು ಪ್ರತಿಭೆ ಸಿಂಚನಾ ಮೂರ್ತಿ ಮಾತ್ರ ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.
ಇವರನ್ನು ಹತ್ತಿರದಿಂದ ಬಲ್ಲವರಿಗೆ, ಸಂಗೀತ ಕೇಳಿದವರಿಗೆ, ನೋಡಿದವರಿಗೆ, ಜೊತೆಯಲ್ಲಿ ಸಹವಾದ್ಯ ನುಡಿಸಿದವರಿಗೆ ಸತ್ಯದರ್ಶನವಾಗುತ್ತದೆ. ನಿಜವಾಗಿಯೂ ಅಂತಹ ಪ್ರತಿಭೆ ಅವರಲ್ಲಿತ್ತು ಎಂಬುದನ್ನು ಸಾಕ್ಷೀಕರಿಸುತ್ತದೆ.

ರಾಜೇಶ್ ನಾಯ್ಕ
Scroll to top