ಆರ್. ಸುರೇಶ್

ವಿವೇಕಹಂಸ ಬಳಗದ ಆತ್ಮೀಯ ದನಿಗಳಲ್ಲಿ ಗುರುಸಿಂಚನಾ ಮೂರ್ತಿ ಅವರ ದನಿಯೂ ಸೇರಿದೆ.
ಅವರು ಬಳಗದ ಸದಸ್ಯರಾಗಿ, ನಮ್ಮ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಜೊತೆಗೆ ವೇದಿಕೆ ಮೇಲೆ ಗಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರ ಬೆಳವಣಿಗೆಯನ್ನು ಗಮನಿಸುತ್ತ ಬಂದಿರುವ ನಮಗೆ ಸಂಗೀತ, ಗಾಯನ ಕ್ಷೇತ್ರದಲ್ಲಿ ಅವರ ಪ್ರಗತಿ ತೃಪ್ತಿ,ಸಂತೋಷಗಳನ್ನು ನೀಡಿದೆ.
ತಮ್ಮದೇ ಆದ ಸಂಗೀತ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಸಂಗೀತಾಸಕ್ತರಿಗೆ ಭಾರತೀಯ ಸಂಗೀತದ ಸೊಬಗನ್ನು ಉಣಬಡಿಸುವ ಮತ್ತು ಶ್ರದ್ಧಾವಂತ ವಿದ್ಯಾರ್ಥಿಗಳಿಗೆ ಕಲಿಸುವ ಕಾಯಕಕ್ಕೆ ಅವರು ಮುಂದಾಗಿರುವುದು ಶ್ಲಾಘನೀಯ.
ಸಿಂಚನಾ ಅವರಿಗೆ ಸಕಲ ಸನ್ಮಂಗಳಗಳು ಉಂಟಾಗಲಿ ಎಂದು ಹಾರೈಸುತ್ತೇವೆ.

ಆರ್. ಸುರೇಶ್
Scroll to top